ಕನ್ನಡ, ಕವಿತೆ, Society

ಗೂಳಿ ಕೂಗು

This was a poem written by renowned actor Kamal Haasan in 2005 on ‘Jallikattu’ in Tamil. Here, I have tried to bring out the essence of the same poem in Kannada.

ಜಲ್ಲಿಕಟ್ಟೊಂದು ಪಾಪವೆಂದು ಹೇಳಿದ ಪ್ರಾಣಿಪ್ರೇಮಿಯ ಕೇಳಿ,
ಮಡಿಕಟ್ಟಿಸಿದವನ ತಾಳಲಾರದ ಹಸಿವ ನೋಡಿ,
ಹೊಟ್ಟೆ ತುಂಬಿಸಿದವನ ರಟ್ಟೆ ತುಂಬಿಸಲು
ಬಿಕರಿಯಾಗಿ ನಾ ಬಂದೆ ಕೋವಯ್ ಟು ಕೇರಳ.

ಆಷಾಡದ ಮಳೆಯಲಿ ದೀರ್ಘ ಪಯಣ
ಲಾರಿಯಲಿ ಆರ್ಸಾಲು ನಾಲ್ಕ್ತಲೆ ಒಂದರಲಿ.
ನಿಲ್ಲುವುದ ಬಿಟ್ಟು ಬೇರೆ ಉಳಿವಿಲ್ಲ.
ಸತ್ತರೂ ಬೀಳುವ ಉಲಿವಿಲ್ಲ.

ನಿಂತು ಬದುಕಲಾಗದೆ ಪಕ್ಕದ ಹೋರಿಯಣ್ಣನಿಗೆ ಬಂತು ಸಾವು,
ಉಸಿರಿಲ್ಲದವನು ಅವನಾದನು ಅಲ್ಲೊಂದು ಉಸುರಿಲಲಿ ಮೇವು.

ಚೂರಿಯನು ಹಿಡಿದೇ ನಗುತ್ತಾ, ಕೊಲ್ಲುವವನು ಬಂದ
ಮೈತುಂಬಿದ ನನ್ನೋಡಿ ಅಂದ,
’ಓ, ಇದು ಖಂಡ, ಕ್ರಿಸ್ಮಸ್ಸಿಗೆ ಕುಯ್ದರೆಂಥ ಚಂದ!’

ಮಿಕ್ಕವರಿಗೆಲ್ಲ ಸಾವಿನಲಿ ಸ್ವಾತಂತ್ರ್ಯದ ಭಿಕ್ಷೆ.
ನನಗೆ, ಅಲ್ಲಿಯವರೆಗೂ ಜೀವಾವಧಿ ಶಿಕ್ಷೆ.

ತಮಿಳು ಮೂಲ: ಕಮಲ್ ಹಾಸನ್
ಕನ್ನಡಕ್ಕೆ : ವಿಘ್ನೇಶ್ ಹಂಪಾಪುರ

Advertisements
Standard

3 thoughts on “ಗೂಳಿ ಕೂಗು

  1. Veena Ramesh says:

    ಸತ್ಯಕ್ಕೆ ಎರಡು ಮುಖಗಳಿದ್ದಲ್ಲಿ, ಒಂದಕ್ಕೆ ಚಾಲ್ತಿ ಸಿಕ್ಕಲ್ಲಿ ಇನ್ನೊಂದು ಕಣ್ಮರೆ. ಸತ್ಯಕ್ಕಿಲ್ಲದ ಈ ನಿರ್ದಿಷ್ಟತೆ ಸಂವೇದನಾಶೀಲ ಮನಸ್ಸಿಗಿದೆ. ಯಾವ ನೋವೂ ಅದರ ಕಣ್ಮರೆ ಆಗದು. ಹಾಗೆಂದೇ ನಿನ್ನ ಮನಸ್ಸು ಹೀಗೆ ಚಿಂತಿಸಿದೆ. ಚೆಂದವಾಗಿ ಬರೆದಿದ್ದೀ.

    Commendable, young man.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s