ಕನ್ನಡ, ಕವಿತೆ, Kannada, Personal, Poetry

ಕಮರಿದ ಕಾಮನೆ

‘ಅವಧಿ’ ಈ-ಪತ್ರಿಕೆಗೆ ಚಿತ್ರವನ್ನಾಧರಿಸಿ ನಾ ಬರೆದ ಕವಿತೆ.

ಅಮ್ಮನ ಗುಡಿಯ ಕಲ್ಯಾಣಿಯಲ್ಲಂದು
ಕಾರ್ತಿಕ ದೀಪೋತ್ಸವದ ಚಂದು.
ಮುಂದು ಮುಂದೆಲ್ಲಾ ಭಕ್ತಜನರ ಸಮಾಗಮ,
ಇರುಳಾಂಧದಲ್ಲಿ ಪ್ರಣತಿಯರ ಕನಿ ದನಿ.

ನೆಗೆ-ನೀರಲ್ಲಿ ನಕ್ಕು ನಗಿಸುತಾ,
ಕಿರುದೆರೆಗಳ ನೆರೆ ಹೀರಿ, ಎರ್ಣೆಯಿಂದ್ ತನು ಹೀರಿ
ತೇಲುತಾ ಸಾಗುತಿತು ದೀಪಗಳ ಸಾಲು.

ಜ್ಯೋತಿಯನು ತಾನ್ ಹಚ್ಚಿಸಿ, ನಯನಾಚುವ ಕರಗಳಿಂದ್
ಕೊಳದೊಳು ಬಿಡುವಾಸೆ ಪುಟ್ಟಿಯಲ್ಲಿ.
ಹಣತೆಯು, ಬತ್ತಿಯು, ಎಣ್ಣೆಯೂ ಇಲ್ಲದೆ
ದೀಪವೆಲ್ಲಾದೀತು ತೇಲಿ ಬಿಡಲು?

ಚಕ್ಕನೆ ಸ್ಪುರಣದಲ್ ಬಂದ ಯೋಜನೆ.
ಕಿಸೆಯಲ್ಲಿತ್ತು ಕಾಗದ, ಕೈಯಲ್ಲಿತ್ತು ಕೌಶಲ.
ದೋಣಿ ಮಾಡಿದಳು, ದೀಪ ಹಚ್ಚಿದಳು.
ಹೊಂಡದಲ್ಲಿಟ್ಟು ಕೈಯಾಡಿಸಿದಳು.

ಅದೇನು ಸಂತಸವೋ! ಮೆಟ್ಟಿಲ ಮೇಲ್ನಿಂತು ಜಗಿದು
ಹರುಷದ ಹರಿವಲ್ಲಿ ನಲಿದು; ಹಾ!
ಹಾಳೆಯನು ಆ ಜ್ವಾಲೆ ಸಾಗುತಲೆ ಆವರಿಸಿ,
ಉರಿದು ಮುದುರಿಕೊಂಡದು ಕರಕಾಯಿತು.

ದೇವರಿಗೆ ಬೆಳಗಿದ ದೀವಿಗೆಯೋ ಅದು?
ದೋಣಿಯನು ದಹಿಸಿದ ಬೆಂಕಿಯೋ ಅದು?
ತಿಳಿಯದೇ ಪುಟ್ಟಿ ತಬ್ಬಿಬ್ಬಾದಳು.

Advertisements
Standard

8 thoughts on “ಕಮರಿದ ಕಾಮನೆ

  1. ambuja.jois says:

    Excellent! Putti is so innocent that she doesn’t know the consequences of lighting in a paper boat .
    Similarly many Puttis in our society are burnt in the love lamps created by lusty youths. Puttis’ handcrafted love boat gets the same fate as depicted in the poem.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s